ಪುಸ್ತಕ ಪರಿಚಯ

ಮಹಾತ್ವಾಕಾಂಕ್ಷೆ ನಿಮ್ಮ ಗೆಲುವು ನಿಮ್ಮಿಂದಲೇ – ಕೆ.ಬಿ. ಪರಶಿವಪ್ಪ

ಆಕಾಂಕ್ಷೆಗಿಂತ ಮಹಾತ್ವಾಕಾಂಕ್ಷೆಯಿಂದ ಗೆಲ್ಲಲು ಹೊರಟರೆ ಗೆಲುವು ಸಿಗುತ್ತದೆ. ಗೆಲ್ಲಲು ಬೇಕಾಗಿರುವ ಅಂಶಗಳು ಯಾವುವು ಅಂತ ಹುಡುಕಲು ಹೊರಟರೆ ಅವು ಸಾಕಷ್ಟಿವೆ. ಈ ಬದುಕು ತುಂಬಾ ಸ್ಪರ್ಧಾತ್ಮಕವಾಗಿದೆ .ಇಲ್ಲಿ ಗೆಲುವಿಗಾಗಿ ಹಂಬಲಿಸುವ ಮನಸ್ಸುಗಳಿಗೆ ಆತ್ಮ ವಿಶ್ವಾಸ ತುಂಬುವ ಒಂದು ಪುಸ್ತಕ ಪರಿಚಯವನ್ನು ಮಾಡುತ್ತಿದ್ದೇನೆ.

ಸ್ನೇಹ ಪ್ರಕಾಶನ ಮತ್ತು ಸ್ನೇಹ ಬುಕ್ ಹೌಸ್‍ನ ಮಾಲಿಕರಾದ ಶ್ರೀ ಕೆ.ಬಿ.ಪರಶಿವಪ್ಪ ನವರ ಚೊಚ್ಚಲ ಕೃತಿಯೇ ಮಹಾತ್ವಾಕಾಂಕ್ಷೆ! ನಿಮ್ಮ ಗೆಲುವು ನಿಮ್ಮಿಂದಲೇ ಎಂಬ ಶೀರ್ಷಿಕೆಯೇ ಹೇಳುವಂತೆ ಇಲ್ಲಿ ಗೆಲ್ಲುವುದು ನೀವೇ ಅದು ನಿಮ್ಮ ನಿರಂತರ ಶ್ರಮ, ಛಲದಿಂದಲೇ ಆದರೆ ಅದಕ್ಕೆ ಬೇಕಿರುವ ಆತ್ಮವಿಶ್ವಾಸ, ಪ್ರೇರಣೆ, ಸ್ಪೂರ್ತಿ, ಎಲ್ಲವನ್ನೂ ಈ ಪುಸ್ತಕ ಕೊಡುತ್ತದೆ.

ಮಹಾತ್ವಾಕಾಂಕ್ಷೆ ಇಟ್ಟುಕೊಂಡು ಈ ಜಗತ್ತಿನಲ್ಲಿ ಗೆದ್ದವರು ಎಷ್ಟೋ ಜನರಿದ್ದಾರೆ. ಅದರಲ್ಲಿ ಕೆಲವರ ಪರಿಚಯವನ್ನು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ವಿದ್ಯಾವಾಚಸ್ಪತಿ ಡಾ: ಅರಳುಮಲ್ಲಿಗೆ ಪಾರ್ಥಸಾರಥಿಯವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಮುನ್ನಡಿಯಲ್ಲಿರುವಂತೆ ಈ ಪುಸ್ತಕ ಓದಿನಿಂದ ಎಲ್ಲರಿಗೂ ಹೊಸದೊಂದು ಮಹತ್ವಾಕಾಂಕ್ಷೆ ಮೂಡಿಬರುತ್ತದೆ. ಧೀರರಂತೆ ಎದ್ದುನಿಲ್ಲುವ, ಏಕಾಗ್ರತೆಯಿಂದ ಮುನ್ನಡೆಯುವ ಆತ್ಮಶಕ್ತಿ ಪ್ರವಹಿಸುತ್ತದೆ. ಜಗ್ಗದೆ, ಬಗ್ಗದೆ, ಕುಗ್ಗದೆ ಸಾಧನೆಯ ಗುರಿಮುಟ್ಟುವವರೆಗೂ ನಡೆಯುವ ಮಾರ್ಗ ಗೋಚರಿಸುತ್ತದೆ. ಜಡತ್ವ ಕೊಡವಿಕೊಂಡು ಎದ್ದು ನಿಲ್ಲಿ. ಮಹತ್ವಾಕಾಂಕ್ಷೆಯೆನ್ನುವ ಮಾಲೆಯನ್ನು ಧರಿಸಿ, ಅದ್ಭುತ ಕನಸು ಕಂಡು ಅದನ್ನು ನನಸಾಗಿಸುವ ಸಂಕಲ್ಪ ಮಾಡಿ, ಶ್ರದ್ಧೆ, ವಿವೇಕ ನಿರಂತರ ಇರಲಿ, ಬಲಿಷ್ಠರಾಗಿ, ವಿಶಿಷ್ಟರಾಗಿ, ಶಕಿಯೇ ಸ್ವರ್ಗ, ದುರ್ಬಲತೆಯೇ ನರಕ, ಶಕ್ತಿಯೇ ಸುಖ, ದೌರ್ಬಲ್ಯವೇ ದು:ಖ, ಶಕ್ತರಾಗಿ ಸಶಕ್ತರಾಗಿ, ಆಕಾದೆತ್ತರಕ್ಕೆ ಎದ್ದು ನಿಲ್ಲಿ, ಭೂಮಿ ಆಕಾಶಗಳನ್ನು ವ್ಯಾಪಿಸಿಕೊಳ್ಳಿ, ಗಾಳಿಯಾಗಿ ಬೀಸಿ,ನೀರಾಗಿ ಜಲಪಾತದಂತೆ ಪ್ರವಹಿಸಿ, ಎಲ್ಲೆಲ್ಲೂ ವ್ಯಾಪಿಸಿಕೊಂಡು ಅದ್ಭುತವಾಗಿ ಬೆಳೆಯಿರಿ. ಎಂಬಂತಹ ಮುನ್ನುಡಿಯ ಮಾತುಗಳನ್ನು ಓದುತ್ತಿದ್ದರೆ. ನಿಮ್ಮಲ್ಲಿ ನಿಮಗೆ ಆತ್ಮವಿಶ್ವಾಸದ ಬೆಳಕು ಕಾಣಿಸುತ್ತದೆ.

ಮಹಾತ್ವಾಕಾಂಕ್ಷೆ ಪುಸ್ತಕ ಇದೇ ಗುರುವಾರದಿಂದ ಪುಸ್ತಕ ಮಳಿಗೆಗಳಲ್ಲಿ ದೊರೆಯಲಿದೆ. ತಪ್ಪದೇ ಕೊಂಡು ಓದಿ, ನಿಮ್ಮ ಗೆಳೆಯರಿಗೆ ಉಡುಗೊರೆಯಾಗಿಯೂ ನೀಡಬಹುದು. ಪುಸ್ತಕ ಓದುವ ಪ್ರೀತಿ ನಿಮ್ಮಲ್ಲಿ ಬೆಳೆಯಲಿ. ಕೊನೆಯ ಮಾತು ಈ ಪುಸ್ತಕದಲ್ಲಿ  ರವಿ ಚನ್ನಣ್ಣನವರ್ ಮತ್ತು ಸತ್ಯನಾರಾಯಣರವರ ಸಾಧನೆಗಳ ಜೊತೆ ನನ್ನ ಬಗ್ಗೆಯೂ(ನವೀನ್ ರಾಮನಗರ) ಒಂದು ಲೇಖನವಿದೆ.

(ಪುಸ್ತಕಗಳು ಆನ್ ಲೈನ್‍ನಲ್ಲಿಯೂ ಲಭ್ಯವಿದ್ದು, ಆನ್ ಲೈನ್ ಖರೀದಿಗಾಗಿ www.mybookadda.net ಜಾಲತಾಣಕ್ಕೆ ಭೇಟಿ ನೀಡಿ)
-ನವೀನ್ ರಾಮನಗರ

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!