ಈ ಭೂಮಿಯ ಮೇಲೆ ಇದ್ದವರು ಇಲ್ಲದವರ ಸಂಖ್ಯೆ ಸಾಕಷ್ಟಿದೆ. ಐಷಾರಾಮಿ ಬದುಕು ಹಾಗೂ ರಸ್ತೆ ಬದಿ ಗೂಡು ಕಟ್ಟಿಕೊಂಡವರನ್ನ ಈ ಸಮಾಜ ಒಳಗೊಂಡಿದೆ. ಹೀಗಾಗಿಯೇ ಇವರಿಬ್ಬರ ನಡುವೆ ಸೇತುವೆಯಾಗಿ ಅನೇಕ ಸಂಘ ಸಂಸ್ಥೆಗಳು ಕೆಲಸ ಮಾಡ್ತಿವೆ. ಅದರಲ್ಲಿ ‘ವಾಲ್ ಆಫ್ ಕೈಂಡ್ ನೆಸ್’ ಅನ್ನೋ ಅಭಿಯಾನ. ಕನ್ನಡದಲ್ಲಿ ಕರುಣೆಯ ಗೋಡೆ ಎನ್ನಲಾಗ್ತಿದೆ. ಗೋಡೆ ಹತ್ತು ಹಲವು ಕೆಲಸಗಳಿಗೆ ಬಳಕೆಯಾಗುತ್ತೆ. ಆದ್ರೆ, ಕರುಣೆಯ ಗೋಡೆ ಅನ್ನೋ ಪದ ಬಂದಾಗ, ಅಲ್ಲಿ ಸಹಾಯದ ಗುಣವಿದೆ.
ನೀರು ಕುಡಿಯುವುದರಿಂದ ಆಗುವ ಪ್ರಯೋಜನ ಓದಿ
ಇವತ್ತು ರಾಜ್ಯದ ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ಅನೇಕ ಕಡೆ ‘ವಾಲ್ ಆಫ್ ಕೈಂಡ್ ನೆಸ್’ ಅನ್ನೋ ಗೋಡೆ ನೋಡುತ್ತಿದ್ದೇವೆ. ಆ ಸಾಲಿಗೆ ಇದೀಗ ಬೆಂಗಳೂರಿನ ರಾಜಾಜಿನಗರದ ಬಳಿಯಿರುವ ಭಾಷಂ ಸರ್ಕಲ್ ಬಳಿ ನಿರ್ಮಿಸಿದ ಸಹಾಯದ ಗೋಡೆ ಸೇರಿಕೊಂಡಿದೆ. ಪ್ರಿಯ ಓದುಗರೆ ಇದರ ಉದ್ದೇಶವಿಷ್ಟೆ, ನಿಮ್ಗೆ ಬೇಡವಾದ ವಸ್ತುಗಳನ್ನ ಇಲ್ಲಿ ತಂದು ಇಡಬಹುದು. ಅವಶ್ಯಕತೆಯಿದ್ದವರು ತೆಗೆದುಕೊಂಡು ಹೋಗ್ತಾರೆ. ಕೊಟ್ಟವರು ಯಾರು, ತೆಗೆದುಕೊಂಡುವರು ಯಾರು ಅನ್ನೋದರ ಚಿಂತೆಯಿಲ್ಲ. ನಿಮ್ಮ ಮನೆಯಲ್ಲಿ ಬೇಡದ ವಸ್ತುವಾಗಿ ಮೂಲೆಯಲ್ಲಿ ಹಾಳಾಗುವ ಬದ್ಲು ಇಲ್ಲಿ ತಂದು ಇಟ್ಟರೆ, ಅದರ ಅವಶ್ಯಕತೆಯಿದ್ದವರು ಪಡೆದುಕೊಳ್ತಾರೆ.
ಬಟ್ಟೆ, ಪುಸ್ತಕ, ಬ್ಯಾಗ್, ಚಪ್ಪಲಿ, ಬೂಟ್ ಹೀಗೆ ನೀವು ಬಳಿಸಿ ಬೇಡವಾದ ವಸ್ತುಗಳನ್ನ ತಂದು ಇಡಬಹುದು. ಆರ್ಥಿಕವಾಗಿ ಶಕ್ತಿಯಿಲ್ಲದವರು, ಬೀದಿ ಬದಿಯಲ್ಲಿ ಬದುಕು ಕಟ್ಟಿಕೊಂಡವರು, ಬದುಕಿಗೊಂದು ಸರಿಯಾದ ನೆಲೆಯಿಲ್ಲದೆ ಅಲೆಯುವ ಜನಗಳಿಗೆ ಇದು ಸಹಾಯವಾಗುತ್ತೆ. ಪುಸ್ತಕ ಓದುವ ಮನಸ್ಸುಗಳಿಗೆ ಜ್ಞಾನ ಹೆಚ್ಚು ಮಾಡಿದಂತಾಗುತ್ತೆ. ಹೀಗಾಗಿ ಇಂದು ಜಗತ್ತು ಸೇರಿದಂತೆ ದೇಶದ ಅನೇಕ ರಾಜ್ಯಗಳ ನಗರಗಳಲ್ಲಿ ‘ಕರುಣೆಯ ಗೋಡೆ’ ಇಲ್ಲದವರಿಗೆ ಸಣ್ಣ ಆಸರೆಯಾಗಿದೆ. ಇದಕ್ಕೆ ಹೇಳೋದು ಸಹಾಯ ಮಾಡಲು ಬರೀ ಹಣ ಬೇಕಿಲ್ಲ. ಒಂದೊಳ್ಳೆ ಮನಸ್ಸು ಸಾಕಲ್ಲವೇ.
ದೇವರ ನಾಡಲ್ಲಿ ರಾಮಾಯಣದ ‘ಜಟಾಯು’ ಪಾರ್ಕ್
ವಾಲ್ ಆಫ್ ಕೈಂಡ್ ನೆಸ್ ಹಿನ್ನೆಲೆ
ಇದು ಮೊದಲು ಶುರುವಾಗಿದ್ದು ಇರಾನ್ ನಲ್ಲಿ.ಇರಾನಿನ ಮಶ್ಜಾದ್ನ ನಿರಾಶ್ರಿತ ಜನರಿಗೆ ಸಹಾಯ ಮಾಡಲು ಇದನ್ನ ಶುರು ಮಾಡಲಾಯ್ತು. ಇದಕ್ಕೆ ಉತ್ತಮ ಬೆಂಬಲ ಸಿಕ್ಕಿತು. ಈ ಸಂಸ್ಕೃತಿ ಬೇರೆ ಬೇರೆ ದೇಶಗಳಿಗೆ ಹರಡಿತು. ಜನರು ಇದನ್ನ ಅಭಿಯಾನದಂತೆ ಶುರು ಮಾಡಿದ್ರು. ಉಗ್ರರ ನೆಲದಲ್ಲಿ ಹುಟ್ಟಿಕೊಂಡ ‘ಕರುಣೆಯ ಗೋಡೆ’ ಮಾನವೀಯ ಮೌಲ್ಯಗಳ ಒಂದು ರೂಪಕದಂತೆ ಕಾಣಿಸುತ್ತೆ. ಇಂಥಹ ಮನಸ್ಸುಗಳ ಸಂತತಿ ಬೆಳೆಯಲಿ ಅನ್ನೋದು ಎಲ್ಲರ ಆಶಯ.