ಅರಿಶಿಣವನ್ನು ನಮ್ಮ ಹಿಂದು ಧರ್ಮದಲ್ಲಿ ಶುಭವೆಂದು ಹೇಳುತ್ತಾರೆ ಮತ್ತು ಮಂಗಳಕರವೆಂದು ಹೇಳಲಾಗಿದೆ. ಇದರಿಂದ ಬಹಳಷ್ಟು ಆರೋಗ್ಯ ವೃದ್ಧಿಯಾಗಿರುವ ಅಂಶಗವೆ. ಅರಿಶಿಣ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ . ಇದರ ಉಪಯೋಗಗಳನ್ನು ಓದಿ ತಿಳಿಯೋಣ ಬನ್ನಿ.
• ಅರಿಶಿಣವನ್ನು ಮಕ್ಕಳಿಗೆ ನೆಗಡಿಯಾದಗ ಸ್ವಲ್ಪ ರಾಗಿ ಹಿಟ್ಟಿನ ಜೊತೆ ಬೆರೆಸಿ ಮಕ್ಕಳ ನೆತ್ತಿಗೆ ತೆಲೆ ಸ್ನಾನ ಮಾಡಿದ ದಿನ ಇಡುವುದರಿಂದ ಕಡಿಮೆಯಾಗುತ್ತದೆ.• ಯಾವುದೇ ರೀತಿ ಗಾಯವಾಗಿ ರಕ್ತ ಸುರಿಯುವಾಗ ಅದರ ಮೇಲೆ ಸ್ವಲ್ಪ ಅರಿಶಿಣ ವನ್ನು ಇಡಿ ಸ್ವಲ್ಪ ಸಮಯದ ನಂತರ ರಕ್ತ ಸುರಿಯುವುದು ನಿಲ್ಲುತ್ತದೆ .• ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಮೇಲಿನ ಮೊಡವೆಯಾವುದನ್ನು ತಡೆಯುವುದರ ಜೊತೆಗೆ ಕಲೆಯನ್ನು ಹೋಗಲಾಡಿಸುತ್ತದೆ.
• ನಮ್ಮ ಚರ್ಮದ ಹೊಳಪನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ. • ಪಿಗ್ಮೆಂಟೇಷನ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
• ಅರಿಶಿಣದ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ಸೋರಿಯಾಸಿಸ್ ಗೆ ಹಚ್ಚಿ ಒಂದು ರಾತ್ರಿ ಹಾಗೆಯೇ ಬಿಟ್ಟು ಮರುದಿನ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತಳೆಯುವುದರಿಂದ ಸೋರಿಯಸಿಸ್ ಸಮಸ್ಯೆ ಕಡಿಮೆಯಾಗುತ್ತದೆ.
• ಲಕ್ಷ್ಮಿ ಸಂತೋಷ್