ಕೆಎಂಎಫ್ ಸುದ್ದಿ

ನಂದಿನಿ ಸಿಹಿ ಉತ್ಸವ ಮತ್ತು ನಂದಿನಿ ಚೀಸ್ ಫೆಸ್ಟ್ ಗೆ ಚಾಲನೆ

ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರುಚಿ ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು “ನಂದಿನಿ” ಬ್ಯ್ರಾಂಡ್ ಅಡಿಯಲ್ಲಿ ಕಳೆದ 40 ವರ್ಷಗಳಿಂದ ಒದಗಿsಸುತ್ತಾ ಬರುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಗ್ರ್ರಾಹಕರ ಆಯ್ಕೆಯ ನೆಚ್ಚಿನ ಬ್ಯ್ರಾಂಡ್ ಆಗಿದೆ. ಉತ್ಕøಷ್ಟ ಗುಣಮಟ್ಟದ ಉತ್ಪನ್ನಗಳ ಜೊತೆಗೆ ಕಾಲಕಾಲಕ್ಕೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಸಹ ನೀಡುತ್ತಾ ಬರುತ್ತಿದ್ದು, ಕರ್ನಾಟಕ ಜನತೆಯ ಅಚ್ಚುಮೆಚ್ಚಿನ ಬ್ಯ್ರಾಂಡ್ ಆಗಿದೆ.

ಇಂದು  (ದಿನಾಂಕ: 24.12.2020 ರಂದು) ಕೆಎಂಎಫ್ ಕೇಂದ್ರ ಕಛೇರಿಯ ಆವರಣದಲ್ಲಿರುವ ನಂದಿನಿ ಪಾರ್ಲರ್‍ನಲ್ಲಿ ನಂದಿನಿ ಸಿಹಿ ಉತ್ಸವ ಮತ್ತು ನಂದಿನಿ ಚೀಸ್ ಫೆಸ್ಟ್‍ಗೆ ಕೆಎಂಎಫ್‍ನ ಸನ್ಮಾನ್ಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಬಾಲಚಂದ್ರ ಲ.ಜಾರಕಿಹೊಳಿ ರವರು ಸಾಂಕೇತಿಕವಾಗಿ ಚಾಲನೆ ನೀಡಿದರು, ಈ ಸಂಧರ್ಭದಲ್ಲಿ ಶ್ರೀ ಭೀಮಾನಾಯಕ್, ಅಧ್ಯಕ್ಷರು ರಾಯಚೂರು-ಬಳ್ಳಾರಿ ಹಾಲು ಒಕ್ಕೂಟ ಹಾಗೂ ಶಾಸಕರು, ಶ್ರೀ ಕೆ.ವೈ ನಂಜೇಗೌಡ, ಅಧ್ಯಕ್ಷರು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗೂ ಶಾಸಕರು, ಕಹಾಮ ಆಡಳಿತ ಮಂಡಳಿ ಸದಸ್ಯರುಗಳು, ಕೆಎಂಎಫ್‍ನ ಜಿಲ್ಲಾ ಹಾಲು ಒಕ್ಕೂಟಗಳ ಮಾನ್ಯ ಅಧ್ಯಕ್ಷರುಗಳು, ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ. ಬಿ.ಸಿ.ಸತೀಶ್, ಕೆಸಿಎಸ್ ರವರು ಮತ್ತು ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹೊಸ ವರ್ಷದ ಸಮಯದಲ್ಲಿ ರಾಜ್ಯದ ಗ್ರಾಹಕರಿಗೆ ಕೆಎಂಎಫ್ ವತಿಯಿಂದ ಬಂಪರ್ ಕೊಡುಗೆಗಳನ್ನು ಜಾರಿಗೊಳಿಸಿದೆ.

ಯೋಜನೆ(1): ಕಳೆದ 4 ವರ್ಷಗಳಿಂದ ಸತತವಾಗಿ ಕೆ.ಎಂ.ಎಫ್ ವರ್ಷದಲ್ಲಿ ಎರಡು ಬಾರಿ “ನಂದಿನಿ ಸಿಹಿ ಉತ್ಸವ”ವನ್ನು ಆಚರಿಸಲಾಗುತ್ತಿದ್ದು, ರಾಜ್ಯ ಮತ್ತು ಹೊರರಾಜ್ಯದ ಮಾರುಕಟ್ಟೆಗೂ ಸಹ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ನೇರವಾಗಿ 10% ರಿಯಾಯಿತಿ ನೀಡಿಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಅಭಿಪ್ರಾಯಗಳ ವ್ಯಕ್ತವಾಗಿ ಸಿಹಿ ಉತ್ಪನ್ನಗಳ ಮಾರಾಟ ಮತ್ತು ಪ್ರಚಾರ ವೃದ್ದಿಗೆ ಅನುಕೂಲವಾಗಿದೆ. ಪ್ರಸ್ತುತ ಹೊಸ ವರ್ಷದ ಆಚರಣೆಯ ಈ ಸಂಧರ್ಭದಲ್ಲಿ ದಿನಾಂಕ 24.12.2020 ರಿಂದ 07.01.2021 ರವರೆಗೆ 15 ದಿನಗಳ ಕಾಲ ರಾಜ್ಯದ್ಯಾಂತ “ನಂದಿನಿ ಸಿಹಿ ಉತ್ಸವ” ಆಚರಿಸಲಾಗುತ್ತಿದ್ದು, ಎಲ್ಲಾ ನಂದಿನಿ ಸಿಹಿಉತ್ಪನ್ನಗಳಾದಮೈಸೂರ್‍ಪಾಕ್/ಪೇಡಾ/ಧಾರವಾಡ/ಕೇಸರ್/ಏಲಕ್ಕಿಪೇಡ/ಬಾದಾಮ್/ಕ್ಯಾಶು/ ಡ್ರೈಪ್ರೂಟ್ರ್ಸ್/ಕೋಕೋನಟ್/ಚಾಕೋಲೇಟ್ ಬರ್ಫಿ/ಕುಂದ/ಜಾಮೂನ್/ರಸಗುಲ್ಲಾ ಜೊತೆಗೆ ನೂತನ ಸಿಹಿ ಉತ್ಪನ್ನಗಳಾದ ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಹಾಲಿನ ಪುಡಿ, ಚಕ್ಕಿ ಲಾಡು, ಸಿರಿಧಾನ್ಯ ಪಾಯಸ, ಸಿರಿಧಾನ್ಯ ಸಿಹಿ ಪೊಂಗಲ್, ಶ್ರೀಖಂಡ್ ಹಾಗು ಕುಕ್ಕೀಸ್‍ಗಳ ಮಾರಾಟ ದರದ ಮೇಲೆ ಶೇ.10 ರಷ್ಟು ರಿಯಾಯಿತಿ ಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತ್ತಿದೆ.

ಯೋಜನೆ(2): ಈ ಹೊಸ ವರ್ಷದ ಸಮಯದಲ್ಲಿ ನಂದಿನಿ ಸಿಹಿ ಉತ್ಸವದ ಜೊತೆಗೆ ಗ್ರಾಹಕರಿಗೆ ಕೆಎಂಎಫ್ ನಿಂದ ಬಂಪರ್ ಕೊಡುಗೆಯಾಗಿ “ನಂದಿನಿ ಚೀಸ್ ಫೆಸ್ಟ್” ಆಚರಿಸಲಾಗುತ್ತಿದ್ದು, ದಿನಾಂಕ: 24.12.2020 ರಿಂದ ಸುಮಾರು 45 ದಿನಗಳ ಅವಧಿಗೆ ನಂದಿನಿ ಎಲ್ಲಾ ಚೀಸ್ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ 5 ರಿಂದ 10 ರಷ್ಟು ರಿಯಾಯಿತಿಯನ್ನು ನೇರವಾಗಿ ಗ್ರಾಹಕರಿಗೆ ನೀಡಲಾಗುತ್ತ್ತಿದೆ.

ಗ್ರಾಹಕರು ಎಲ್ಲಾ ನಂದಿನಿ ಪಾರ್ಲರ್‍ಗಳು/ಮಳಿಗೆಗಳು, ಕ್ಷೀರ ಕೇಂದ್ರಗಳು, ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್‍ಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳು ಮತ್ತು ಚೀಸ್‍ಗಳನ್ನು ರಿಯಾಯಾತಿ ದರದಲ್ಲಿ ಪಡೆಯಬಹುದಾಗಿದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!