ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೆಲವರು ತಮ್ಮ ಪಾಡಿಗೆ ತಾವು ಬದುಕುತ್ತಾರೆ. ಇನ್ನೂ ಕೆಲವರು ಸಮಾಜಕ್ಕೆ ಏನಾದರೂ ಮಾಡಬೇಕೆಂಬ ಬಯಕೆಯಿಂದ ಒಂದಿಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅಂತವರ ಸಾಲಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಮೇಗೌಡರು ಒಬ್ಬರು.
ಕುರಿ ಮೇಯುಸುತ್ತಾ ಕಾಡಿನಲ್ಲಿ ಅಲೆಯ ಬೇಕಾದರೆ ಕೆರೆ ಇಲ್ಲವೆಂಬ ಕಾರಣಕ್ಕೆ ತಾವೇ ಸ್ವತ: ಕುರಿಗಳನ್ನು ಮಾರಿ ಕೆರೆ ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಇವರು ಈ ಕಾಯಕ ಮಾಡಬೇಕಾದರೆ ಎಲ್ಲರೂ ಆಡಿಕೊಂಡು ನಕ್ಕಿದ್ದೆ ಹೆಚ್ಚು ಆದರೆ ಅವರ ಕಾಯಕದಲ್ಲಿ ಅವರಿಗೆ ನಂಬಿಕೆ ಇದ್ದ ಕಾರಣ ಕೆರೆ ಕಟ್ಟೆಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಿಸಿ ಇಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿಯವರಿಂದ ಮೆಚ್ಚುಗೆ ಪಡೆದಿದ್ದಾರೆ.
ಕಳೆದ 42 ವರ್ಷಗಳ ಹಿಂದೆ ದಾಸನದೊಡ್ಡಿಯ ಪಕ್ಕದಲ್ಲೇ ಇರುವ ಕುಂದಿನಿಬೆಟ್ಟದ ತಪ್ಪಲಿನ ಬರಡು ಭೂಮಿಯ ನೋಡಿ ಇವರ ಮನಸ್ಸಿನಲ್ಲಿ ಕೆರೆ ನಿರ್ಮಿಸುವ ಆಲೋಚನೆ ಮೂಡುತ್ತದೆ. ಪ್ರಾಣಿ ಪಕ್ಷಿಗಳು ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತಿದ್ದ ಪರಿಸ್ಥಿತಿ ಕಾಮೇಗೌಡರ ಮನದಲ್ಲಿ ಕೆರೆ ನಿರ್ಮಿಸಲು ಪ್ರೇರಣೆಯಾಗುತ್ತದೆ. ಮೊದಲು ಒಂದು ಕೊಳ ಅಗೆಯುತ್ತೇನೆಂದು ನಿರ್ಧರಿಸಿದ ಕಾಮೇಗೌಡರು ಸುಮಾರು 42 ವರ್ಷಗಳಲ್ಲಿ 16 ಕೊಳಗಳನ್ನು ನಿರ್ಮಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಎಲ್ಲರಿಗೂ ಒಂದಲ್ಲ ಒಂದು ಚಟ ಇರುತ್ತದೆ ಆದರೆ ನನಗೆ ಕೊಳ ತೋಡುವ ಚಟ ಎಂದು ಸ್ವತ: ಅವರೇ ಹೇಳುತ್ತಾರೆ. ಇಂತಹ ಮಹಾನ್ ವ್ಯಕ್ತಿಗೆ ದೇಶದ ಪ್ರಧಾನಿ ಮೋದಿಜಿ ಅಭಿನಂದಿಸಿದ್ದು. ನಿಜಕ್ಕೂ ಅರ್ಥಪೂರ್ಣ ಮತ್ತು ಇತರರಿಗೆ ಮಾದರಿ.
-Naveen Ramanagara