ಸಾಧಕರು

ಸೈನಿಕನಾಗಬೇಕಾದವ ಹೈನುಗಾರನಾದಕಥೆ (ಇಬ್ಬರೂದೇಶದ ಬೆನ್ನೆಲುಬುಗಳೇ)

ಮೈಸೂರಿನಿಂದ 15 ಕಿ.ಮೀ ದೂರದಲ್ಲಿದೆಮೇಗಳಾ ಪುರ, ಆ ಗ್ರಾಮದವರೇ 46 ವರ್ಷದಶ್ರೀ ಜಗದೀಶ್ ಮೇಗಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದಅಧ್ಯಕ್ಷರು (ಕಳೆದ 15 ವರ್ಷಗಳಿಂದ), ಇವರು ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರು ನಗರದಲ್ಲಿ, ದ್ವಿತೀಯ ಪಿ.ಯು.ಸಿವರೆಗೆ ಇವರ ವಿದ್ಯಾಭ್ಯಾಸ ನಡೆಯಿತು. ಇವರಜೀವನದ ಪರಮೋದ್ದೇಶ ಸೈನಿಕನಾಗುವುದು.

ಅದಕ್ಕಾಗಿಯೇತಮ್ಮನ್ನುತಾವು ವಿವಿಧಕ್ರೀಡೆಯಲ್ಲಿ ತೊಡಗಿಸಿಕೊಂಡು ದೈಹಿಕವಾಗಿಯೂ ಸದೃಢರಾದರು.ಯಾರೋ ತಿಳಿದವರು ಹೇಳಿದಂತೆ SSಐಅ ಪಾಸಾದರೆ ಸಾಕು ತಾನು ಸೈನಿಕನಾಗಲು ಅರ್ಹತೆ ಪಡೆಯುವೆಎಂದು ಪಿ.ಯು.ಸಿವರೆಗೆ ಮಾತ್ರ ವಿದ್ಯಾಭ್ಯಾಸ ಪಡೆದು, ನಂತರ ಮಿಲಿಟರಿ ಸೇವೆಗೆ ಸೇರಲು ಹರಸಾಹಸ ಪಟ್ಟರು. ಕೊನೆಗೆ ದೈಹಿಕ ಸದೃಢತೆಗಾಗಿ ಬೆಂಗಳೂರಿನಲ್ಲಿ ಮೆಡಿಕಲ್‍ಆಸ್ಪತ್ರೆಗೆ ವೈದ್ಯಕೀಯದೃಢೀಕರಣ ಪಡೆಯಲು ತೆರಳಿ, ಪಾಪ! ಅವರುಒಂದು ದಿನಕ್ಕೆ ಕೆಲಸ ಮುಗಿಯಬಹುದೆಂದು ತಿಳಿದು ಅಷ್ಟಕ್ಕೆ ಮಾತ್ರಅಗತ್ಯವಿರುವ ಹಣವನ್ನು ಹೇಗೋ ಹೊಂದಿಸಿಕೊಂಡು ಬೆಂಗಳೂರನ್ನು ತಲುಪಿದರು. ಆದರೆದುರದೃಷ್ಟಕರ ಸಂಗತಿಯೆಂದರೆ 4 ದಿನ ಕಳೆದರೂ ಅವರ ವೈದ್ಯಕೀಯ ಪರೀಕ್ಷೆ ಪೂರ್ಣಗೊಳ್ಳಲಿಲ್ಲ! ಮೊದಲ ಎರಡು ದಿನಕ್ಕೆ ಅವರ ಬಳಿಯಿದ್ದ ಹಣವೆಲ್ಲಖರ್ಚಾಗಿಕೊನೆಯ 2 ದಿನದಿಂದಊಟವೂಇಲ್ಲದೆ ಕೇವಲ ನೀರುಕುಡಿದು, ಅಲ್ಲಿಯೇಜಾಗ ಸಿಕ್ಕಲ್ಲಿ ನಿದ್ರೆ ಮಾಡಿ, ಯಾವಾಗಕೊನೆಯ ದಿನವೂ ಸಹ ಕೆಲಸವಾಗಲಿಲ್ಲ ಹಸಿವು ತಾಳಲಾರದೆ ಅಪರಿಚಿತರ ಬಳಿ ಸಹಾಯ ಕೇಳಲು ಸ್ವಾಭಿಮಾನಅಡ್ಡಬಂದುಅಲ್ಲಿಂದಕಾಲ್ಕಿತ್ತರು. ಆಸ್ಪತ್ರೆಯಿಂದ ನೇರವಾಗಿರೈಲ್ವೇ ಸ್ಟೇಷನ್ನಿಗೆ ನಡೆದು, ಟಿಕೆಟ್ ಕೊಳ್ಳದೆ ರೈಲು ಹತ್ತಿರೈಲಿನ ಬಾಗಿಲ ಬಳಿಯೇ ಕೂತರು, ಏಕೆಂದರೆಟಿಕೆಟ್‍ಕಲೆಕ್ಟರ್‍ಟಿಕೆಟ್ ಕೇಳಿದರೆ ಎಲ್ಲಿತನಗೆ ಹಾಗೂ ತನ್ನ ಮನೆಯವರಿಗೆಅವಮಾನವಾಗುತ್ತದೋಎಂದು ಹೆದರಿಅಲ್ಲಿಂದಲೇ ಹಾರಿಬಿಡುವಯೋಚನೆಯಲ್ಲಿದ್ದಯುವಕನ ಬಳೀ ಅದೃಷ್ಟವಶಾತ್‍ಯಾರುಟಿಕೆಟ್‍ನ್ನು ಪರಿಶೀಲಿಸಲೇ ಇಲ್ಲ. ಹೀಗೆ ಬೆಂಗಳೂರಿನಿಂದ ಹಸಿವು ತಾಳಲಾರದೆ ಬಂದಜಗದೀಶ್‍ರವರಕಥೆ ಕೇಳಿ ನಮ್ಮ ಕಣ್ಣಾಲೆಗಳು ಒದ್ದೆಯಾದವು. ಇದು ಇಂದಿನ ಯುವಪೀಳಿಗೆಯ ಅನುಭವಕ್ಕೆ ಬಾರದ ಪರಿಸ್ಥಿತಿ.
ಈ ಹಿನ್ನೆಲೆಯಲ್ಲಿ ಮುಂದುವರೆಯುತ್ತಾ, ಜಗದೀಶ್‍ರವರು ಮೇಗಳಾಪುರದ ಸುತ್ತ ಮುತ್ತಜಗಪ್ಪಎಂದೇ ಪ್ರಸಿದ್ದಿ, ಹೈನುರಾಸುಗಳ ಆಪದ್ಬಾಂಧವ, ಆ ಭಾಗದ ರಾಸುಗಳ ನಿರ್ವಹಣೆ ಸಂಬಂಧ ಏನೇ ಸಮಸ್ಯೆಗಳಿದ್ದರೂ ಇವರ ಸಲಹೆ ಸೂಚನೆಯನ್ನು ಚಾಚೂ ತಪ್ಪದೇಅಲ್ಲಿನಜನ ಪಾಲಿಸುತ್ತಾರೆ.ಒಕ್ಕೂಟದ ಪಶುವೈದ್ಯರು ಭೇಟಿ ನೀಡುವುದರೊಳಗಾಗಿ ಪ್ರಥಮಚಿಕಿತ್ಸೆಯನ್ನು ನೀಡಿರುತ್ತಾರೆ.ಆ ಪ್ರದೇಶದ ಸುತ್ತಮುತ್ತಲಿನ ರಾಸುಗಳೂ ಸಹ ಜಗಪ್ಪರನ್ನುಗುರುತಿಸುವಷ್ಟು ಪ್ರಸಿದ್ಧಿ.

ಇವರುತಮ್ಮ 23ನೇ ವಯಸ್ಸಿಗೆ ಮೈಸೂರು ನಗರದಿಂದತಮ್ಮೂರಾದ ಮೇಗಳಾಪುರದ ಜಮೀನಿಗೆ ಬಂದು ನೆಲೆಸುತ್ತಾರೆ.ತಮ್ಮತಂದೆ ದಿ: ಚಿಕ್ಕಣ, ತಾಯಿ ಸಿದ್ದಮ್ಮ ಹಾಗೂ ಅಣ್ಣ ಶ್ರೀ ಬಸವರಾಜುರವರ ಮಾರ್ಗದರ್ಶನದಲ್ಲಿ ಕೃಷಿ ಸೇವೆಯಲ್ಲಿತೊಡಗುತ್ತಾರೆ. ಚಿಕ್ಕವರಿನಿಂದಲೂ ಸಹ ತಮ್ಮ ಮನೆಯಲ್ಲಿದ್ದ ಆಕಳÀನ್ನು ನಿರ್ವಹಣೆ ಮಾಡುವಅನುಭವವಿದ್ದರಿಂದಅವರು ಹೈನುಗಾರಿಕೆ ಪ್ರಾರಂಭಿಸಲುತಡ ಮಾಡಲಿಲ್ಲ. ಇಂದು ಪ್ರತಿ ಮನೆಯಲ್ಲಿ ನಾಯಿ / ಬೆಕ್ಕುಗಳಿರುವಂತೆ 1970-80 ರದಶಕದಲ್ಲಿ ನಗರ ಪ್ರದೇಶಗಳಲ್ಲಿನ ಜನರ ಮನೆಯಲ್ಲಿ ಆಕಳಿರುವುದು ಸರ್ವೇ ಸಾಮಾನ್ಯವಾಗಿತ್ತು. ಏಕೆಂದರೆ ನಮ್ಮದೇಶದಲ್ಲಿ ನಗರಗಳಿಗಿಂತ ಹಳ್ಳಿಗಳೇ ಹೆಚ್ಚು, ಆಕಳಿರದ ಮನೆ ಮಕ್ಕಳಿರದ ಮನೆ ಎರಡೂಒಂದೇಎನ್ನುವ ಮಾತಿದ್ದರಿಂದ ನಮ್ಮ ಹಳೆಯ ತಲೆಮಾರಿನವರು ಗ್ರಾಮಗಳಿಂದ ನಗರ ಪ್ರದೇಶಗಳಿಗೆ ವಲಸೆ ಬಂದರೂ ಸಹ ಹೈನುಗಾರಿಕೆಯನ್ನುಜೊತೆಗೆತಂದರು. ಶ್ರೀ ಜಗದೀಶ್‍ರವರು ನಗರದಿಂದ ಹಳ್ಳಿಗೆ ವಾಪಸ್ಸು ತೆರಳಿದ ಮೇಲೆ ತಮಗಾಗಿಎರಡು ಕರುಗಳನ್ನು ಖರೀದಿ ಮಾಡುತ್ತಾರೆ.ಅದೇ ಮೊದಲು ಹಾಗೂ ಕೊನೆ ಅವರು ಹೊರಗಡೆಯಿಂದ ರಾಸುಗಳನ್ನು ಖರೀದಿ ಮಾಡಿರುವುದು.ತದನಂತರತಮ್ಮಲ್ಲಿರುವ ರಾಸುಗಳನ್ನೇ ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ವರ್ಷಕ್ಕೊಂದು ಹಸುವಿನಂತೆ ಹಸುಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಎರಡು ಕರುಗಳಿಂದ 10 ವರ್ಷಗಳಲ್ಲಿ 15-20 ರಾಸುಗಳಿಗೆ ಹೆಚ್ಚಿಸುವಷ್ಟರ ಮಟ್ಟಿಗೆ ಹೈನುಗಾರಿಕೆಯಲ್ಲಿತಮ್ಮನ್ನುತಾವು ತೊಡಗಿಸಿಕೊಳ್ಳುತ್ತಾರೆ.ಇವರು ಸಂಘಕ್ಕೆ ಪ್ರತಿದಿನ ಗರಿಷ್ಟ 150 ಲೀ ರವರೆಗೆ ಹಾಲು ಪೂರೈಸಿರುತ್ತಾರೆ.ಇದರಜೊತೆಗೆಕೃಷಿಯಲ್ಲಿತೆಂಗು, ಅಡಿಕೆಇತರೆತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆÉ.

ಅಲ್ಲದೆರೇಷ್ಮೆಕೃಷಿಯಲ್ಲಿಯೂ ಕಳೆದ 10 ವರ್ಷಗಳಿಂದ ತಮ್ಮನ್ನುತಾವು ತೊಡಗಿಸಿಕೊಂಡಿದ್ದು, ಇಲ್ಲಿಯೂ ಸಹ ತಮಗಿರುವ ಸ್ಥಳಾವಕಾಶಕ್ಕೆ ಗರಿಷ್ಟ ಇಳುವರಿಯನ್ನು ಪಡೆದು ಲಾಭ ಗಳಿಸುತ್ತಿದ್ದಾರೆ.ಒಟ್ಟಾರೆಇವರು ಸಮಗ್ರ ಕೃಷಿ ಪದ್ಧತಿಯನ್ನು(Integrated Farming) ಅಳವಡಿಸಿಕೊಂಡಿದ್ದು, ಇವರತೋಟವನ್ನುಒಂದು ಮಾದರಿಯಾಗಿ ಪರಿಗಣಿಸಿ ಅಧ್ಯಯನ ಪ್ರವಾಸ ಕೈಗೊಳ್ಳಬಹುದು.ಏಕೆಂದರೆತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ, ಕುರಿ ಸಾಕಾಣೆ, ನಾಟಿ ಕೋಳಿ ಸಾಕಾಣೆ, ಪಾರಿವಾಳ, ವಿವಿಧ ಬ್ರೀಡ್‍ನ ನಾಯಿಗಳು, ಲವ್ ಬಡ್ರ್ಸ್ ಹಕ್ಕಿಗಳ ವ್ಯಾಪಾರಎಲ್ಲವೂ ನಡೆಯುತ್ತಿದೆ.

ಮೇಗಳಾಪುರದ ತೋಟದಲ್ಲಿಯೇಇವರುಅಗತ್ಯಕ್ಕೆತಕ್ಕ ಮಟ್ಟಿಗೆ ಹೆಂಚಿನ ಮನೆಯನ್ನು ಬಹಳ ಚೊಕ್ಕವಾಗಿ ಕಟ್ಟಿಕೊಂಡಿದ್ದಾರೆ.ಇವರ ಮನೆಯೊಡತಿಯಾದ ಶ್ರೀಮತಿ ಮಂಜುಳಾರವರು ಹಾಗೂ ಮಕ್ಕಳಾಗಲೀ ಎಂದೂ ಮೈಸೂರು ನಗರ ಹತ್ತಿರದಲ್ಲಿದೆಅಲ್ಲಿಯೇ ವಾಸ ಮಾಡುವ ಬಗ್ಗೆ ಇಚ್ಚೆ ವ್ಯಕ್ತಪಡಿಸಿಲ್ಲ. ಇದಕ್ಕೆಜಗದೀಶ್‍ರವರುತಮ್ಮ ಮನೆಯವರ ಬಗ್ಗೆ ಬಹಳಷ್ಟು ಕೃತಘ್ಞರಾಗಿದ್ದಾರೆ.ಮನೆಯಲ್ಲಿರುವಪ್ರತಿಯೊಬ್ಬರುತಮ್ಮತೋಟದ ಏಳಿಗೆಗಾಗಿ ದುಡಿಯುತ್ತಿದ್ದಾರೆ.ಗಂಡು ಮಕ್ಕಳಿಬ್ಬರು ಮೈಸೂರಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿದ್ದು, ಪ್ರತಿ ದಿನ ವ್ಯಾಸಾಂಗಕ್ಕಾಗಿ ಮೈಸೂರಿಗೆತಮ್ಮಊರಿನಿಂದಲೇಓಡಾಡುತ್ತಿದ್ದಾರೆ.ತಮ್ಮ ರಾಸುಗಳಿಗಾಗಿ ಬೆಳೆದಿರುವ ಹುಲ್ಲನ್ನು ಹಾಗೂ ರೇಷ್ಮೆ ಹುಳುಗಳಿಗೆ ಅಗತ್ಯವಿರುವ ಹಿಪ್ಪುನೇರಳೆ ಸೊಪ್ಪನ್ನುಕೊಯ್ಯುವುದು, ಕೊಟ್ಟಿಗೆ ಸ್ವಚ್ಚಗೊಳಿಸುವುದು ರಾಸುಗಳಿಗೆ ಸೂಕ್ತ ರೀತಿಯಲ್ಲಿ ಮೇವು ನೀಡುವಎಲ್ಲ ಕೆಲಸಗಳನ್ನು ಮನೆಯವರೆಲ್ಲ ಸೇರಿ ಮಾಡುತ್ತಾರೆ.

ಇವರು ಹೊರಗಿನಿಂದ ಕೆಲಸಕ್ಕೆಂದು ಆಳುಗಳÀನ್ನು ಕರೆಯುವುದಿಲ್ಲ (ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ) ಮನೆಯವರೆಲ್ಲ ಸೇರಿಎಲ್ಲವನ್ನು ನಿಭಾಯಿಸುತ್ತಾರೆ. ಹೈನುಗಾರಿಕೆಯನ್ನು ಈ ಕೆಳಗೆ ತಿಳಿಸಿರುವಂತೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.
1. ವೈಜ್ಞಾನಿಕವಾಗಿಕೊಟ್ಟಿಗೆ ನಿರ್ಮಾಣ ಮಾಡಿದ್ದು, ಅಲ್ಲಿ ಗಾಳಿ, ಬೆಳಕಿಗೆ ಯಾವುದೇಕೊರತೆಯಿಲ್ಲ, ಇದರಜೊತೆಗೆತಂಪಾಗಿರಲೆಂದು ಫ್ಯಾನ್‍ಗಳನ್ನು ಅಳವಡಿಸಿದ್ದಾರೆ. ಕೊಟ್ಟಿಗೆಯಲ್ಲಿ ಶೇಖರಣೆಯಾಗುವಗಂಜಲ ಹಾಗೂ ಸಗಣಿಯನ್ನು ಸಹ ಶೇಖರಿಸುತ್ತಾರೆ.ಗಂಜಲ, ರಾಸುಗಳನ್ನು ತೊಳೆದ ನೀರನ್ನುಒಂದುತೊಟ್ಟಿಯಲ್ಲಿ ಶೇಖರಿಸಿ ಆ ತೊಟ್ಟಿಗೆ ಮೋಟರ್‍ನ್ನು ಅಳವಡಿಸಿ, ಬಯೋಡೈಜೆಸ್ಟರ್ ಮಾದರಿಯಲ್ಲಿ ಪೈಪ್ ಮೂಲಕ ಅವರತೋಟದಲ್ಲಿರುವತೆಂಗು ಹಾಗೂ ರಾಸುಗಳ ಆಹಾರಕ್ಕಾಗಿ ಬೆಳೆಸಲಾಗಿರುವ ವಿವಿಧಜಾತಿಯ ಹುಲ್ಲು, ಸೊಪ್ಪುಗಳಿಗೆ ಹಾಯಿಸುತ್ತಾರೆ.
2. ಸಗಣಿಯನ್ನುತಮ್ಮತೋಟಕ್ಕೆಅಗತ್ಯವಿರುವಷ್ಟು ಬಳಸಿ ಉಳಿದದ್ದನ್ನು ಮಾರಾಟ ಮಾಡಿಅದರಲ್ಲಿಯೂಆದಾಯ ಗಳಿಸುತ್ತಾರೆ.
3. ಹಸಿ ಮೇವು ಮತ್ತು ಒಣ ಮೇವನ್ನು ಸಣ್ಣ ಸಣ್ಣ ತುಂಡುಗಳಾಗಿ ನೀಡಿದರೆ ರಾಸುಗಳು ಮೇವನ್ನು ನಷ್ಟ ಮಾಡದೆ ಸಂಪೂರ್ಣವಾಗಿ ಬಳಸಿಕೊಳ್ಳುತ್ತವೆ. ಅದಕ್ಕಾಗಿಒಕ್ಕೂಟದ ವತಿಯಿಂದ ಸಬ್ಸಿಡಿಯಲ್ಲಿ ನೀಡಲಾಗುವ ಮೇವು ಕತ್ತರಿಸುವಯಂತ್ರವನ್ನು ಬಳಸುತ್ತಿದ್ದಾರೆ.
4.ಇವರತೋಟದಲ್ಲಿ 10 ಕ್ಕಿಂತ ಹೆಚ್ಚು ರಾಸುಗಳಿರುವುದರಿಂದ ಸಮಯ ಹಾಗೂ ಮಾನವ ಸಂಪನ್ಮೂಲದ ಉಳಿತಾಯಕ್ಕಾಗಿ ಹಾಲು ಕರೆಯುವಯಂತ್ರವನ್ನು ಬಳಸುತ್ತಿದ್ದು, ಕೆಲವೇ ನಿಮಿಷಗಳಲ್ಲಿ ಹಾಲು ಕರೆದು ಸೂಕ್ತ ಸಮಯಕ್ಕೆ ಹಾಲನ್ನು ಸಂಘಕ್ಕೆ ಮಾರಾಟ ಮಾಡುವುದರಿಂದ ಶುದ್ಧ ಹಾಲು ಉತ್ಪಾದನೆ ಮಾಡಲು ಸಹ ಅನುವಾಗುತ್ತಿದೆ.
5.ರಾಸುಗಳಿಗೆ ಪ್ರತಿ ದಿನ ಸ್ನಾನ ಮಾಡಿಸಿ ಕೊಟ್ಟಿಗೆಯನ್ನು ಸಹ ಶುಚಿಗೊಳಿಸುತ್ತಿದ್ದು, ಇದರಿಂದ ರಾಸುಗಳಿಗೆ ಉಣ್ಣೆ ಹಾಗೂ ಹುಳ ಉಪ್ಪಟಗಳ ಕಾಟವಿಲ್ಲದೆ ರಾಸುಗಳು ಆರೋಗ್ಯವಾಗಿರಲು ಸಹಾಯವಾಗುತ್ತ್ತಿದೆ.
6. ಇಂದಿನ ಹೈನುಗಾರರ ನಿಜವಾದ ಸವಾಲು ಹಾಲು ಉತ್ಪಾದನಾ ವೆಚ್ಚ ತಗ್ಗಿಸುವುದು, ಇದಕ್ಕೆ ಶ್ರೀ ಜಗದೀಶ್‍ರವರು ಮಾದರಿಯಾಗಿದ್ದಾರೆ. ಹಾಲು ಉತ್ಪಾದನೆಯ ವೆಚ್ಚ ಕಡಿಮೆ ಮಾಡಲು ರಾಸುಗಳಿಗೆ ಅಗತ್ಯವಿರುವ ಮೇವನ್ನುತಮ್ಮತೋಟದಲ್ಲಿಯೇತೆಂಗಿನ ಮರಗಳ ಮಧ್ಯದಲ್ಲಿ ಸ್ಥಳವನ್ನು ವ್ಯರ್ಥ ಮಾಡದೇಒಕ್ಕೂಟದಿಂದ ಸಬ್ಸಿಡಿದರದಲ್ಲಿ ನೀಡಲಾಗುವ ಹಸಿರು ಮೇವಿನ ಬಿತ್ತನೆಗಳನ್ನು ಅಂದರೆ ಹೈಬ್ರೀಡ್ ನೇಪಿಯರ್, ಗಿನಿ, ರೋಡ್ಸ್ ಹುಲ್ಲನ್ನು ಬೆಳೆಯುತ್ತಿದ್ದಾರೆ ಅಲ್ಲದೆ ಮೇವಿನ ಮುಸುಕಿನ ಜೋಳ, ವೆಲ್ವೆಟ್ ಬೀನ್ಸ್, ಕುದುರೆ ಮಸಾಲೆಯನ್ನುತಮಗೆ
ಅಗತ್ಯವಿರುವಷ್ಟು ಬೆಳೆದು ಹೊರಗಿನ ಹಿಂಡಿ ಬೂಸ ಖರೀದಿ ವೆಚ್ಚವನ್ನುಕಡಿಮೆ ಮಾಡಿಕೊಂಡಿದ್ದಾರೆ.ಇದಲ್ಲವೇ ಬುದ್ದಿವಂತಿಕೆಯೆಂದರೆ.
7.ಒಕ್ಕೂಟದಿಂದ ನೀಡಲಾಗುವ ಪಶು ಆಹಾರ, ಖನಿಜ ಮಿಶ್ರಣವನ್ನುರಾಸುವಿನ ಗಾತ್ರ ಹಾಗೂ ಹಾಲಿನ ಇಳುವರಿಗನುಗುಣವಾಗಿ ಒಕ್ಕೂಟದಲ್ಲಿನ ಅಧಿಕಾರಿಗಳ ಮಾರ್ಗದರ್ಶನದಂತೆತಪ್ಪದೆ ನೀಡುತ್ತಾರೆ. ಇವರಯಾವೊಂದು ಹಸುವು ಬಡಕಲಾಗಿರುವುದನ್ನು ನೋಡಲು ಸಾಧ್ಯವಿಲ್ಲ. ಸಾಕಷ್ಟು ಪೋಷಕಾಂಶಯುಕ್ತಆಹಾರ ನೀಡುವುದರಿಂದ ವರ್ಷಕ್ಕೊಂದುಕರು ಪಡೆಯುವುದುಇವರಿಗೆ ಕಷ್ಟವೇ ಅಲ್ಲ.
8.ಒಕ್ಕೂಟದಿಂದ ಈ ಹಿಂದೆಇವರತೋಟದಲ್ಲಿ ಸೈಲೇಜ್ (ರಸಮೇವು) ತೊಟ್ಟಿಯನ್ನು ನಿರ್ಮಾಣ ಮಾಡಿ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿತ್ತು.ಅಜೋಲದತೊಟ್ಟಿಯನ್ನು ಮಾಡಿಕೊಂಡು ರಾಸುಗಳಿಗೆ ಅತೀ ಹೆಚ್ಚಿನ ಪ್ರೊಟೀನ್‍ಯುಕ್ತಅಜೋಲವನ್ನು ಸಹ ನೀಡುತ್ತಿದ್ದಾರೆ.
9.ರಾಸುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಇವರು ಶೇ 90 ರಷ್ಟು ಮನೆಯ ಮದ್ದನ್ನೇ ಬಳಸುತ್ತಾರೆ. ಏಕೆಂದರೆಇವರು ಸದಾ ರಾಸುಗಳ ಜೊತೆಒಡನಾಟವಿರುವುದರಿಂದ ಪ್ರಾಥಮಿಕ ಹಂತದಲ್ಲಿಯೇರಾಸುಯಾವರೋಗದ ಲಕ್ಷಣವನ್ನುತೋರುತ್ತಿದೆಎಂದು ತಿಳಿದು ಮನೆಯ ಮದ್ದನ್ನು ನೀಡಿ ವಾಸಿ ಮಾಡಿಕೊಂಡುಅನಗತ್ಯಆಂಟಿಬಯೋಟಿಕ್(Antibiotics))ಅಂಶವು ರಾಸುವಿನ ದೇಹ ಹೊಕ್ಕಲು ಬಿಡದೆ ಸಾಮಾಜಿಕಜವಾಬ್ದಾರಿಯನ್ನು ಮೆರೆದಿದ್ದಾರೆ.
ಯುವಪೀಳಿಗೆಯನ್ನು ಕುರಿತುಇವರು ಏನು ಹೇಳ ಬಯಸುತ್ತಾರೆಎಂದು ಕೇಳಿದಾಗ ತಮ್ಮ ವಾರ್ಷಿಕಆದಾಯವನ್ನು ಬಿಚ್ಚಿಟ್ಟರು ಹಾಗೂ 5-10 ಸಾವಿರ ರೂಗಳಿಗಾಗಿ ತಮ್ಮಗ್ರಾಮವನ್ನುತ್ಯಜಿಸುವಯುವಕರಿಗೆತಮ್ಮಜೀವನವೇ ಮಾದರಿಎಂದಾಗಯಾರಾದರೂ ರೋಮಾಂಚನಗೊಳ್ಳದೆ ಇರುವುದಿಲ್ಲ. ಏಕೆಂದರೆಕೃಷಿಯಾಗಲೀ ಹೈನುಗಾರಿಕೆಯಾಗಲೀಯಾವುದು ಹತ್ತಿಯ ಹಾಸಿಗೆಯಲ್ಲ ಈ ಕ್ಷೇತ್ರದಲ್ಲಿಯೂ ಏಳು ಬೀಳುಗಳಿದ್ದು, ಕೃಷಿಯಲ್ಲಿ ಶಿಸ್ತು ಅತೀ ಮುಖ್ಯಎಂಬುದನ್ನು ಹೇಳುವುದನ್ನು ಇವರು ಮರೆಯಲಿಲ್ಲ. ಇವರು ಹೈನುಗಾರಿಕೆ, ತೋಟಗಾರಿಕೆ ಬೆಳೆ, ರೇಷ್ಮೆ ಸಾಕಾಣೆ, ಕೋಳಿ ಸಾಕಾಣೆಯಿಂದ ವಾರ್ಷಿಕ 18-20 ಲಕ್ಷಗಳ ವಹಿವಾಟು ನಡೆಸುತ್ತಿದ್ದು, ಇದರಲ್ಲಿಖರ್ಚು ಶೇ.25-30 ಕಳೆದರೂ ಯಾವ ಸಾಫ್ಟ್‍ವೇರ್‍ಉದ್ಯೋಗಿಗೂಕಡಿಮೆಯಿಲ್ಲದಂತೆದುಡಿಯುತ್ತಿರುವುದು ಹೆಮ್ಮೆಯ ಸಂಗತಿ.
ಇವರಿಗೆ 2014 ರಲ್ಲಿ ಮೈಸೂರುದಸರಾ ಸಮಿತಿ ವತಿಯಿಂದ ಪ್ರಗತಿ ಪರರೈತರೆಂದು ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ ಹಾಗೂ 2022-23 ನೇ ಸಾಲಿನಲ್ಲಿರಾಜ್ಯ ಸರ್ಕಾರದ ವತಿಯಿಂದಜಿಲ್ಲಾ ಮಟ್ಟದಲ್ಲಿನ ಪ್ರಗತಿ ಪರರೈತರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗೋ ಪಾಲನೆಯಇತಿಹಾಸವು ಮಾನವನಇತಿಹಾಸದಷ್ಟೇ ಪುರಾತನ, ಪಶು ಪಾಲನೆ & ಕೃಷಿ ಒಂದಕ್ಕೊಂದು ಪೂರಕ ಮತ್ತು ಪರಸ್ಪರಅವಲಂಬಿತ. ಹೈನು, ಸಗಣಿ, ಗಂಜಲ, ಜೈವಿಕ ಅನಿಲ ಹಾಗೂ ಉಳುಮೆಗೆ ದನಕರುಗಳ ಸಾಕಾಣಿಕೆಅಗತ್ಯ, ಅದಕ್ಕೆ ನಮ್ಮ ಪೂರ್ವಿಕರು ಗೋವಿಗೆ ದೇವರ ಸ್ಥಾನ ನೀಡಿಅರ್ಥಪೂರ್ಣಗ್ರಾಮೀಣ ಬದುಕು ರೂಪಿಸಿಕೊಂಡಿದ್ದರು. ಪಶು ಸಂಗೋಪನಾ ಚಟುವಟಿಕೆಗಳು ಪೂರ್ಣಕಾಲಿಕಉದ್ಯೋಗವನ್ನು ನೀಡುವುದರಜೊತೆಗೆ ನಿರಂತರಆದಾಯತರುವ ಮೂಲಕ ಗ್ರಾಮೀಣಜನರಜೀವನಾಧಾರವಾಗಿದೆ.
“ಸಾಧಿಸುವ ಮುನ್ನಕಿವುಡನಾಗು, ಸಾಧಿಸಿದ ಮೇಲೆ ಮೂಕನಾಗು” ಎನ್ನುವಂತೆ ನಮ್ಮಜಗಪ್ಪಇಂದು ಹೈನುಗಾರಿಕೆ ಹಾಗೂ ಸಮಗ್ರಕೃಷಿಯ ನೈಪುಣ್ಯತೆ ಪಡೆದಿದ್ದು, ತಮ್ಮಅನುಭವವನ್ನುಇತರರೈತರಿಗೂ ಪಸರಿಸುತ್ತಾ ಸೇವಾ ನಿರತರಾಗಿದ್ದಾರೆ ಹಾಗು ಯುವಜನತೆಗೆ ಮಾದರಿಯಾಗಿದ್ದಾರೆ.

ಸೌಮ್ಯ ನಾಗಪ್ಪ,M.S.W, PGD-HRM ಉಪ ವ್ಯವಸ್ಥಾಪಕರು (ಆಡಳಿತ)
ಮೈಸೂರುಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!