ಗಾದೆಮಾತು!

ಸೋಲೆ ಗೆಲುವಿನ ಸೋಪಾನ….

ಗಾದೆಗಳು ಹಿರಿಯರು ತಮ್ಮ ಜೀವನಾನುಭವದಿಂದ ಕಟ್ಟಿರುವ ನುಡಿಗಟ್ಟುಗಳು. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಗಾದೆ ಮಾತುಗಳನ್ನು ಇಂದಿಗೂ ಕೂಡ ಸಾಕಷ್ಟು ಜನರು ತಮ್ಮ ದಿನನಿತ್ಯದ ಬದುಕಿನಲ್ಲಿ ಸಮಯ ಮತ್ತು ಸಂದರ್ಭಗಳಿಗೆ ಅನುಸಾರವಾಗಿ ಬಳಸುತ್ತಾರೆ. ಸಾವಿರಾರು ಗಾದೆಮಾತುಗಳು ಚಾಲ್ತಿಯಲ್ಲಿವೆ.

ಸೋಲೆ ಗೆಲುವಿನ ಸೋಪಾನ: ಈ ಗಾದೆ ಮಾತೆ ಹೇಳುವ ಹಾಗೆ ಸೋಲು ಗೆಲುವಿನ ಸೋಪಾನ ಈ ಬದುಕು ಬಹಳ ಸ್ಪರ್ಧಾತ್ಮಕವಾದದ್ದು ಇಲ್ಲಿ ಗೆಲ್ಲಲು ಸಾಕಷ್ಟು ಜನ ಪ್ರತಿ ನಿತ್ಯ ಹೋರಾಟ ಮಾಡುತ್ತಲೇ ಇರುತ್ತಾರೆ ಆದರೆ ಗೆಲುವೆಂಬುದು ಅಷ್ಟು ಸುಲಭವಾಗಿ ಯಾರ ಕೈಗೂ ಸಿಗದೇ ತುಂಬಾ ಆಟವಾಡಿಸುತ್ತದೆ. ಗೆಲ್ಲಲೇ ಬೇಕೆಂಬ ಅದಮ್ಯ ಆಸೆ ಮತ್ತು ಸತತ ಪ್ರಯತ್ನ ಹಾಗೂ ಪ್ರಾಮಾಣಿಕವಾದ ಹೋರಾಟದಿಂದ ಗೆಲುವನ್ನು ಪಡೆಯಬಹುದು. ಸೋಮಾರಿಗಳಿಗೆ, ಆಲಸ್ಯ ವ್ಯಕ್ತಿಗಳಿಗೆ ಯಾವತ್ತಿಗೂ ಈ ಗೆಲುವು ಒಲಿಯುವುದಿಲ್ಲ.

ಪರೀಕ್ಷೆಗಳಲ್ಲಿ, ಸಂದರ್ಶನಗಳಲ್ಲಿ ಮತ್ತು ಉದ್ಯೋಗ ಹುಡುಕಾಟದಲ್ಲಿ ಸೋತ ಎಷ್ಟೊ ವ್ಯಕ್ತಿಗಳು ತಮ್ಮ ಬದುಕೆ ಮುಗಿದು ಹೋಯಿತು ಎಂಬಂತೆ ನಿರಾಶರಾಗುತ್ತಾರೆ. ಒಂದು ಸೋಲು ನಿಮಗೆ ಸಾಕಷ್ಟು ನೋವನ್ನು ಕೊಡಬಹುದು, ಆದರೆ ಅದೆ ಅಂತಿಮವಲ್ಲ! ಸೋಲು ಮತ್ತು ಗೆಲುವು ರಾತ್ರಿ ಹಗಲಿನ ಹಾಗೆ ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರುತ್ತದೆ. ಹಾಗೆಯೇ ಸೋತನೆಂದು ಕೊರಗದೆ ದೃತಿಗೆಡದೆ ಸೋಲನ್ನು ಒಂದು ಸವಾಲಾಗಿ ಸ್ವೀಕರಸಿ ಮತ್ತೊಮ್ಮೆ ಪ್ರಯತ್ನಿಸಿದರೆ ಗೆಲುವು ನಿಶ್ಚಿತ. ಈ ಪ್ರಪಂಚದಲ್ಲಿ ಯಾರೊಬ್ಬರು ಒಮ್ಮೇಲೆ ಗೆದ್ದಿಲ್ಲ! ಸೋತು ಗೆದ್ದವರೇ ಹೆಚ್ಚು. ಸೋಲೆಂಬುದು ಅಲ್ಪವಿರಾಮ ಅಂತ ಭಾವಿಸಿ ಗೆಲುವಿನ ದಾರಿಯಲ್ಲಿ ಸಾಗಿ ಗೆಲುವು ಸಿಕ್ಕೆ ಸಿಗುತ್ತದೆ.

ಯಶಸ್ಸಿನ ಉತ್ತುಂಗವನ್ನು ಕಂಡಿರುವ ಬಾಲಿವುಡ್‍ನ ಅಮಿತಾ ಬಚ್ಚನ್, ಕ್ರಿಕೆಟ್ ತಾರೆ ಸಚಿನ್ ತೆಂಡೋಲ್ಕರ್, ಕನ್ನಡದ ಜನಪ್ರಿಯ ನಟರಾದ ಸುದೀಪ್, ಗಣೇಶ್, ದರ್ಶನ್, ಯಶ್ ಇನ್ನೂ ಅನೇಕರು ಸೋಲನ್ನು ಅನುಭವಿಸಿ ಅದನ್ನು ಸವಾಲಾಗಿ ಸ್ವೀಕರಿಸಿ ಗೆಲುವಿಗಾಗಿ ಹಂಬಲಿಸಿ ಯಶಸ್ಸನ್ನು ಪಡೆದವರು. ಸೋಲೆ ಗೆಲುವಿನ ಸೋಪಾನ ಅಂತ ಹಿರಿಯರು ಹೇಳಿದ್ದು ಏಕೆ ಅಂತ ತಿಳಿಯಿತಲ್ಲ? ಗೆಲುವು ಸಿಗುವವರೆಗೂ ಛಲ ಬಿಡದೆ ಮುನ್ನುಗ್ಗಿ, ಆಗ ಯಶಸ್ಸು ನಿಮ್ಮನ್ನು ಬೇಡವೆಂದರೂ ಬೆನ್ನಟ್ಟಿ ಬಂದೇ ಬರುತ್ತದೆ.

About the author

bbmadmin

Leave a Comment

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!