ನನ್ನ ಪರಿಚಯ

ಆತ್ಮೀಯರೇ,
ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ! ಇಂಟರ್ನೆಟ್ ನಲ್ಲಿ ಸಿಕ್ಕ ಫೋಟೋಗಳು ಮತ್ತು ಓದಿದ್ದು , ಕೇಳಿದ್ದು, ಹೊಳೆದದ್ದು, ಅನುಭವಿಸಿದ್ದು, ಎಲ್ಲವೂ ಸೇರಿ “ಬದುಕಿಗೊಂದು ಭರವಸೆಯ ಮಾತಾಗಿ ಕಳೆದ 2012ನೇ ಇಸವಿಯಿಂದ ಫೇಸ್ ಬುಕ್ ಪುಟವಾಗಿ ಜನ್ಮತಾಳಿ ಕನ್ನಡಿಗರ ಪ್ರೀತಿ ವಿಶ್ವಾಸಗಳಿಂದ ಜನಪ್ರಿಯವಾಗಿದೆ.

ಹೊಸ ಚಿಗುರುಗಳೊಂದಿಗೆ ಕವಲೊಡೆದ ಈ ಪುಟ ಕನ್ನಡದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು. ಭಾರತವೂ ಒಳಗೊಂಡಂತೆ ಸುಮಾರು ೫೦ ರಾಷ್ಟ್ರಗಳಲ್ಲಿರುವ ಸಾವಿರಾರು ಕನ್ನಡಿಗರು ಈ ಪುಟದ ಅಭಿಮಾನಿಗಳಾಗಿದ್ದರೆ. ಈ ಪುಟ ಪ್ರಾರಂಭವಾದ ಮೇಲೆ ಇದರ ನೆರಳಂತೆ ಸಾಕಷ್ಟು ಕನ್ನಡದ ಫೇಸ್ ಬುಕ್ ಪುಟಗಳು ಜನ್ಮತಾಳಿದವು. ಬದುಕಿಗೊಂದು ಭರವಸೆಯ ಮಾತು ಪುಟ ಹಂತ ಹಂತವಾಗಿ ಜನಪ್ರಿಯತೆಯಿಂದ ಸಾಕಷ್ಟು ಕವಲೊಡೆದು ವ್ಯಕ್ತಿತ್ವ ವಿಕಸನ ಉಪನ್ಯಾಸಗಳು, ಚಿಗುರು ಕನ್ನಡ ಫ್ರೇಮ್ಸ್ , ಬದುಕಿಗೊಂದು ಭರವಸೆಯ ಮಾತು ಕನ್ನಡ ಬ್ಲಾಗ್ , ಕನ್ನಡ ನುಡಿಮುತ್ತು ಚಿತ್ರ ಪ್ರದರ್ಶನಗಳು, ವಿಶೇಷ ಫೇಸ್ ಬುಕ್ ಲೈವ್ ಕಾರ್ಯಕ್ರಮಗಳು , ಹೀಗೆ ವಿಶಿಷ್ಟರೀತಿಯಲ್ಲಿ ಕನ್ನಡಿಗರ ಹೃದಯದಲ್ಲಿ ಶ್ವಾಶ್ವತವಾದ ಸ್ಥಾನ ಪಡಯುವಲ್ಲಿ ಯಶಸ್ವಿಯಾಯಿತು.

2016 ರಿಂದ ಗಾದೆ ಮಾತು , ಒಗಟು , ಕರ್ನಾಟಕ ರಸಪ್ರಶ್ನೆ , ಉಪಯುಕ್ತ ಮಾತುಕತೆ , ಸುದ್ಧಿಗಳು , ಬದುಕಿಗೊಂದು ಭರವಸೆಯ ಮಾತು ಎಲ್ಲವನ್ನು ಒಳಗೊಂಡ “ಭಾನುವಾರ ನವೀನ್ ಜೊತೆಯಲ್ಲಿ “(ಸಂಡೇ ವಿಥ್ ನವೀನ್ ) ಫೇಸ್ ಬುಕ್ ಲೈವ್ ಕಾರ್ಯಕ್ರಮವನ್ನು ಬದುಕಿಗೊಂದು ಭರವಸೆಯ ಮಾತು ಪುಟದಲ್ಲಿ ನಡೆಸಿಕೊಡುತ್ತಿದ್ದು ಇಲ್ಲಿಯವರೆಗೆ ೫೧ ಸಂಚಿಕೆಗಳು ಆಗಿರುರುತ್ತದೆ.

ಸದಾ ಹೊಸದನ್ನು ಬಯಸುವ ಮನಸ್ಸು ನನ್ನದು! ನನ್ನಲ್ಲಿ ಚಿಗುರುರೊಡೆದ ನನ್ನ ಕನಸುಗಳು ಮತೊಬ್ಬರಿಗೆ ಸ್ಫೂರ್ತಿಯಾಗಲಿ ಎಂಬ ಆಶಯದೊಂದಿಗೆ ಈ ವೆಬ್ ಸೈಟ್ ಪ್ರಾರಂಭಿಸಿದ್ದೇನೆ. ಇಲ್ಲಿ ನಿಮಗೆ ಉಪಯುಕ್ತವಾಗುವ ಮತ್ತು ನಿಮ್ಮ ಬದುಕನ್ನು ಮತ್ತಷ್ಟು ಚೆಂದಗೊಳಿಸುವಂತಹ ಲೇಖನಗಳು ಮಾಹಿತಿಗಳು ದೊರಕಲಿವೆ.

ನನ್ನ ಎಲ್ಲಾ ವಿನೂತನ ಪ್ರಯತ್ನಗಳಿಗೂ ನೀವು ಪ್ರೋತ್ಸಾಹಿಸಿ ಆಶೀರ್ವಾದ ಮಾಡಿದ್ದೀರಿ. ಹಾಗೆಯೇ ಈ ನೂತನ ಪ್ರಯತ್ನಕ್ಕೂ
ನಿಮ್ಮ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದವಿರಲಿ.
ಸಲಹೆ ಮತ್ತು ಸೂಚನೆಗಳಿಗೆ ಸ್ವಾಗತ

ನಿಮ್ಮ ಪ್ರೀತಿ , ವಿಶ್ವಾಸ , ಅಭಿಮಾನ ನಿರಂತರವಾಗಿರಲಿ!
ಪ್ರೀತಿಯಿಂದ ,
ನವೀನ್, ರಾಮನಗರ
ಅಡ್ಮಿನ್ : ಬದುಕಿಗೊಂದು ಭರವಸೆಯ ಮಾತು !

Facebook Like Box

Copyright © 2024 BBMNAVEEN2012.COM All Rights Reserved.

error: Content is protected !!